October 25, 2025
sathvikanudi - ch tech giant

ವೈದ್ಯರ ನಿರ್ಲಕ್ಷ್ಯದಿಂದ 3 ಮಂದಿ ಸಾವು ಸರ್ಕಾರದಿಂದ ಪರಿಹಾರ ಘೋಷಣೆ.!?

Spread the love

ಪಾವಗಡ :

ಪಾವಗಡ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ 3 ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಬಳಿಕ ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ. ಮೃತರ ಕುಟುಂಬಗಳ ನೋವನ್ನು ಸ್ವಲ್ಪವಾದರೂ ತಣಿಸಲು, ಸರ್ಕಾರ ತಲಾ 4 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿದೆ.

ಪ್ರತಿಯೊಬ್ಬ ಮೃತರ ಕುಟುಂಬಕ್ಕೂ 4 ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ಈ ಪರಿಹಾರ ಧನವನ್ನು ಸ್ಥಿರ ಠೇವಣಿಯಾಗಿ ಇಡಲು ಸರ್ಕಾರ ಸೂಚನೆ ನೀಡಿದೆ.

ಈ ಯೋಜನೆಯಡಿ, ಅಪ್ರಾಪ್ತ ಮಕ್ಕಳಿಗೆ ಇರುವ ಕುಟುಂಬಗಳಲ್ಲಿ, ಮಕ್ಕಳ ಮತ್ತು ತಂದೆಯ ಹೆಸರಿನಲ್ಲಿ ಜಂಟಿ ಖಾತೆ ತೆರೆದು, ಧನವನ್ನು ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಸ್ಥಿರ ಠೇವಣಿ(ಎಫ್. ಡಿ) ರೂಪದಲ್ಲಿ ಇಡಲು ಸೂಚನೆ ನೀಡಲಾಗಿದೆ.

ಈ ಪರಿಹಾರದ ಮೂಲಕ ಕುಟುಂಬಗಳು ಮುಂದೆ ಬಾಳಿನಲ್ಲಿ ಕನಿಷ್ಟ ಆರ್ಥಿಕ ನೆರವನ್ನು ಪಡೆಯಲಿವೆ. ಸರ್ಕಾರದ ಈ ಕ್ರಮವು ಅವರು ಎದುರಿಸುತ್ತಿರುವ ಸಂಕಷ್ಟವನ್ನು ಸ್ವಲ್ಪವಾದರೂ ತಗ್ಗಿಸಬೇಕೆಂದು ಉದ್ದೇಶಿಸಿದೆ.

ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ನಿರ್ಲಕ್ಷ್ಯ ತಡೆಗಟ್ಟಲು ಮತ್ತು ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ತಡೆಯಲು ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಆದರೂ, ಇಂತಹ ದಾರುಣ ಘಟನೆಗಳು ಮತ್ತೆ ಸಂಭವಿಸದಂತೆ  ಕಠಿಣ ನಿಯಮಾವಳಿ ಮತ್ತು ಜವಾಬ್ದಾರಿಯನ್ನು ಜಾರಿಗೆ ತರುವ ಅವಶ್ಯಕತೆಯಿದೆ.

WhatsApp Image 2025-06-21 at 19.57.59
Trending Now