September 10, 2025
sathvikanudi - ch tech giant

ಕುಂದಾಪುರ: ಅಂಗನವಾಡಿ ಕಾರ್ಯಕರ್ತೆಯ ಕರ್ತವ್ಯ ದುರ್ಬಳಕೆ – ಅಧಿಕಾರಿಗಳ ಮೌನ ಆತಂಕಕಾರಿ..!

Spread the love



ಕುಂದಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಗಂಭೀರ ಆರೋಪಗಳು ಹೊರಹೊಮ್ಮಿದ್ದು, ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿದೆ. ನಾಗರತ್ನ ಎಂಬ ಕಾರ್ಯಕರ್ತೆ ಕೆಲಸದ ಸಮಯದಲ್ಲಿ ಜವಾಬ್ದಾರಿಯಿಲ್ಲದ ರೀತಿಯಲ್ಲಿ ಮೊಬೈಲ್‌ನಲ್ಲಿ ಸಮಯ ಕಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಘಟನೆ ಮಕ್ಕಳ ಮೇಲ್ವಿಚಾರಣೆಯ ಕೊರತೆಯಲ್ಲದೆ, ಅಂಗನವಾಡಿ ಸೇವೆಗಳ ಪ್ರಾಮಾಣಿಕತೆಗೆ ದೊಡ್ಡ ಧಕ್ಕೆಯಾಗುತ್ತಿದೆ.



ಇತ್ತೀಚೆಗೆ ಅಂಗನವಾಡಿ ಕೇಂದ್ರದಲ್ಲಿ ದವಸಧಾನ್ಯಗಳು ಕಣ್ಮರೆಯಾಗಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಸೂಪರ್ವೈಸರ್‌ಗಳು ವಿಚಾರಣೆ ನಡೆಸಿದ ನಂತರ, 25 ಕೇಜಿ ಅಕ್ಕಿ ಮತ್ತಿತರ ವಸ್ತುಗಳು ಮರುದಿನದಲ್ಲೇ ವಾಪಸ್ ಇದ್ದ ಸ್ಥಳದಲ್ಲಿ ಕಂಡುಬಂದಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಅಂಗನವಾಡಿ ಬೀಗವನ್ನೇ ಸ್ಥಳೀಯ ಪ್ರಭಾವಿ ವ್ಯಕ್ತಿಯ ಮನೆಯಲ್ಲಿ ಇಡುವ ವಾಡಿಕೆಯ ವಿಷಯ ಕೂಡ ಜನರ ಕೋಪಕ್ಕೆ ಕಾರಣವಾಗಿದೆ.

ಇದರ ಹಿಂದೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗುತ್ತಿದೆ. CDPO ಸೇರಿದಂತೆ ಮೇಲ್ವಿಚಾರಣೆ ನಡೆಸಬೇಕಾದ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದರೂ ಸುಮಾರು ದಿನಗಳಿಂದ ನಾಗರತ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ನಿರಾಶೆಯನ್ನು ಹೆಚ್ಚಿಸಿದೆ.

ಸ್ಥಳೀಯರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಜವಾಬ್ದಾರಿಯುತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳಾದರೂ , ಕರ್ತವ್ಯಲೋಪ ಮಾಡಿರುವ ಸಿಬ್ಬಂದಿಗಳಾದ CDPO,  ಮತ್ತು ಕಾರ್ಯಕರ್ತೆಯ ವಿರುದ್ಧ ಸೂಕ್ತ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಕ್ರಮದಿಂದ ಮುಂದಿನ ದಿನಗಳಲ್ಲಿ ಬೀಜವಾಬ್ಧಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆಲ್ಲಾ ಮುನ್ಸೂಚನೆ ಯಾಗಿರುವುದೆಂದು ಸಾರ್ವಜನಿಕರು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ವರದಿ :ಆರತಿ ಗಿಳಿಯಾರ್

WhatsApp Image 2025-06-21 at 19.57.59
Trending Now