March 3, 2026
Spread the love

ದಾವಣಗೆರೆ ಜಿಲ್ಲೆ :


ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಪಂಚಾಯತಿ ಆಡಳಿತ ಅಧಿಕಾರಿಗಳು ಭಾರೀ ನಿರ್ಲಕ್ಷ್ಯ ಜನರ ಜೀವದ ಮೇಲೆಯೇ ಭೀಕರ ಅನಾರೋಗ್ಯದ ಪರಿಣಾಮ ಬೀರಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಕಳೆದ ಎರಡು ವರ್ಷಗಳಿಂದ ಸ್ವಚ್ಛತಾ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಚರಂಡಿಗಳು ಮುಚ್ಚಿಕೊಂಡು ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ದುರ್ವಾಸನೆ, ಸೊಳ್ಳೆಗಳ ಕಾಟ ಮತ್ತು ಅಸ್ವಚ್ಛ ವಾತಾವರಣದಿಂದ ಗ್ರಾಮವೇ ರೋಗಗಳ ಗೂಡಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಸೊಳ್ಳೆ ಕಡಿತದಿಂದ ಕಾಲು ಭಾವು ಬಂದಿರುವುದು)


ಗ್ರಾಮದಲ್ಲಿ ಟೈಫಾಯ್ಡ್, ಡೆಂಗ್ಯೂ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಿದ್ದು, ಮಕ್ಕಳಿಂದ ಹಿಡಿದು ವೃದ್ಧರ ತನಕ ಅನೇಕರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಕೆಲವರು ಪಕ್ಕದ ಜಿಲ್ಲೆಗಳ ಆಸ್ಪತ್ರೆಗಳಿಗೆ ಅಲೆದಾಡುವ ದುಸ್ಥಿತಿ ಎದುರಿಸುತ್ತಿದ್ದಾರೆ. ಇದಕ್ಕೂ ಮೀರಿಸಿ, ಟೈಫಾಯ್ಡ್‌ನಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದರೂ, ಪಂಚಾಯತಿ ಆಡಳಿತ ತುರ್ತು ಕ್ರಮ ಕೈಗೊಳ್ಳದಿರುವುದು ಜನರ ಕೋಪವನ್ನು ಮತ್ತಷ್ಟು ಉರಿಯುವಂತೆ ಮಾಡಿದೆ. “ಇನ್ನೂ ಎಷ್ಟು ಜೀವ ಹೋದರೆ ಕ್ರಮ ಕೈಗೊಳ್ಳುತ್ತಾರೆ?” ಎಂಬ ಪ್ರಶ್ನೆ ಗ್ರಾಮದಲ್ಲಿ ಕೇಳಿಬರುತ್ತಿದೆ.

(“ಅನುದಾನ ಇಲ್ಲ” ಅಂದರೆ ಜವಾಬ್ದಾರಿ ಇಲ್ಲವೇ? ಪಂಚಾಯಿತಿ ವಿರುದ್ಧ ಕಿಡಿಕಾರಿದ ಗ್ರಾಮಸ್ಥರು)


“ತೆರಿಗೆ ಸಂಗ್ರಹವಾಗಿಲ್ಲ, ಅನುದಾನ ಬಂದಿಲ್ಲ, ಆದ್ದರಿಂದ ಸ್ವಚ್ಛತೆ ಮಾಡಿಲ್ಲ” ಎಂಬ ಪಿಡಿಒ ಶ್ರೀಮತಿ ರೂಪ ಅವರ ಹೇಳಿಕೆ ಜನರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಎಂಬುದು ಪಂಚಾಯತಿಯ ಮೂಲ ಕರ್ತವ್ಯ. ಹಣದ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಚರಂಡಿ ಸ್ವಚ್ಛತೆ, ಫಾಗಿಂಗ್, ಔಷಧ ಸಿಂಪಡಣೆ, ಕಸದ ತೆರವು ಇತ್ಯಾದಿ ಕನಿಷ್ಠ ಕರ್ತವ್ಯಗಳನ್ನೇ ನಿರ್ಲಕ್ಷಿಸುವುದು ಆಡಳಿತದ ವೈಫಲ್ಯವಷ್ಟೇ ಅಲ್ಲ, ಹೊಣೆಗಾರಿಕೆರಹಿತ ಧೋರಣೆಯ ಸ್ಪಷ್ಟ ಉದಾಹರಣೆ ಎಂದು ಸಾಮಾಜಿಕ ಸಂಘಟನೆಗಳು ಟೀಕಿಸಿವೆ.

ಸಾಂದರ್ಭಿಕ :


ಇದಕ್ಕೆ ಪೂರಕವಾಗಿ ಜನವಸತಿ ಪ್ರದೇಶದ ಸಮೀಪದಲ್ಲೇ ಕೋಳಿ ಫಾರಂಗೆ ಅನುಮತಿ ನೀಡಿರುವುದು ಮತ್ತೊಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಿಯಮಾನುಸಾರ ಕನಿಷ್ಠ 1 ಕಿಮೀ ದೂರದಲ್ಲಿರಬೇಕಾದ ಫಾರಂ ಮನೆಗಳ ಪಕ್ಕದಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ದುರ್ವಾಸನೆ, ನೊಣಗಳ ಕಾಟ ಹಾಗೂ ಅಸ್ವಚ್ಛ ಪರಿಸ್ಥಿತಿ ಹೆಚ್ಚಾಗಿದೆ. ಇದರಿಂದ ಮಕ್ಕಳಿಗೂ ವೃದ್ಧರಿಗೂ ಹೆಚ್ಚು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.

ಅಧಿಕಾರಿಗಳ ನಿರ್ಧಾರ ಪ್ರಕ್ರಿಯೆಯ ಮೇಲೆ ಅನುಮಾನ ಮೂಡಿದ್ದು, ನಿಯಮಗಳನ್ನು ಉಲ್ಲಂಘಿಸಿ ಅನುಮತಿ ನೀಡಿದವರ ವಿರುದ್ಧ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳೀಯ ರಾಜಕೀಯ ವಲಯದಲ್ಲಿಯೂ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರು ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ತೀವ್ರ ಟೀಕೆ ನಡೆಸಿ, “ಜನರ ಜೀವದೊಂದಿಗೆ ಆಟವಾಡುವ ಆಡಳಿತಕ್ಕೆ ಕ್ಷಮೆಯಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಜನರಿಂದಲೇ ಆಯ್ಕೆಯಾದ ಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸದಿರುವುದು ಜನತಂತ್ರದ ಅವಮಾನವೆಂದು ಅಭಿಪ್ರಾಯ ವ್ಯಕ್ತವಾಗಿದೆ.


ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ತಕ್ಷಣ ಹಸ್ತಕ್ಷೇಪಿಸಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ. ಲಿಂಗಾಪುರದಲ್ಲಿ ಉಂಟಾದ ಪರಿಸ್ಥಿತಿ ಕೇವಲ ಆಡಳಿತ ವೈಫಲ್ಯವಲ್ಲ; ಇದು ಸಾರ್ವಜನಿಕ ಆರೋಗ್ಯದ ಮೇಲಿನ ಗಂಭೀರ ಅನ್ಯಾಯ. ಮುಂದಿನ ಚುನಾವಣೆಯಲ್ಲಿ ಜನ ತೀರ್ಪು ನೀಡಲಿದ್ದಾರೆ ಎಂಬ ಎಚ್ಚರಿಕೆ ಈಗಾಗಲೇ ಸ್ಪಷ್ಟವಾಗಿ ಕೇಳಿಬರುತ್ತಿದೆ.

ಈಗಷ್ಟೇ ಕಣ್ಣು  ಬಿಟ್ಟು ಪಂಚಾಯತಿಗಳಲ್ಲಿ  ನಾನೆ ಎಲ್ಲಾ ಎಂದು ಮೆರೆದಾಡಿರುವ ಕೆಲವು ಪುಡಾರಿಗಳು, ಸೇವೆಯ ಮಾತು, ಸೆಟ್ಲ್‌ಮೆಂಟ್ ಗುರಿ: ಪುಡಿ ರಾಜಕೀಯ ಪುಡಾರಿಗಳ ಅಸಲಿ ಮುಖ! ನಿಮ್ಮ ಮುಂದೆ.

ಲಿಂಗಾಪುರ ಗ್ರಾಮಸ್ಥರೆ ನೀವೇ ಆಯ್ಕೆ ಮಾಡಿರುವ ಕೆಲವು ಸದಸ್ಯರುಗಳು ನಿಮಗೆ ಮಕ್ಮಲ್ ಟೋಪಿ ಹಾಕಿ ನಿಮ್ಮ ಕಣ್ಣಿಗೆ ಮಣ್ಣೇರಚಿ ಲಕ್ಷ ಲಕ್ಷ ಲೂಟಿ ಮಾಡಿರುವ ನಿಮ್ಮ ಸದಸ್ಯರೂಗಳ ಅತೀ ದೊಡ್ಡ ಹಗರಣದ ಭಾಗ 1…..!.? ಅತೀ ಶೀಘ್ರದಲ್ಲೇ

“ಮತ ಕೇಳುವಾಗ ವಿನಯ, ಹುದ್ದೆ ಸಿಕ್ಕ ಮೇಲೆ ದುರಾಸೆ: ಸದಸ್ಯರು ಕಾಮಗಾರಿ ಹೆಸರಿನಲ್ಲಿ ಲಕ್ಷ ಲಕ್ಷ ಹಣದ ದಂಧೆ ಭಟಾ ಬಯಲು!” ✍🏻✍🏻✍🏻✍🏻✍🏻

Leave a Reply

Your email address will not be published. Required fields are marked *