
ಶಿವಮೊಗ್ಗ ನಗರದ UCO ಬ್ಯಾಂಕ್ ಶಾಖೆಯಲ್ಲಿ ನಡೆದಿರುವ ಘಟನೆ ಸಾರ್ವಜನಿಕ ಬ್ಯಾಂಕ್ ವ್ಯವಸ್ಥೆಯ ನಿಜ ಮುಖವನ್ನು ಬಯಲಿಗೆ ತಂದಿದೆ. ಗ್ರಾಹಕ ಸೇವೆ ಎಂಬ ಪದವೇ ಇಲ್ಲದಂತೆ, ಬ್ಯಾಂಕ್ ಸಿಬ್ಬಂದಿಯ ಅಹಂಕಾರ, ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಗ್ರಾಹಕರನ್ನು ಅವಮಾನಿಸುವ ಮಟ್ಟಕ್ಕೆ ತಲುಪಿದೆ.
ಮಧ್ಯಾಹ್ನ 1.30ರ ಸುಮಾರಿಗೆ, Google Pay ಮೂಲಕ ಹಣ ವರ್ಗಾವಣೆ ಆಗದ ಸಮಸ್ಯೆ ಕುರಿತು ಗ್ರಾಹಕರೊಬ್ಬರು ಬ್ಯಾಂಕ್‌ಗೆ ಬಂದಾಗ, ಸಮಸ್ಯೆ ಪರಿಹರಿಸುವ ಬದಲು ಸಿಬ್ಬಂದಿ ಕರ್ತವ್ಯ ಲೋಪ ತೋರಿದ್ದಾರೆ.
“ಅಕೌಂಟ್ ಬ್ಲಾಕ್ ಆಗಿಲ್ಲ, ಫ್ರೀಜ್ ಕೂಡ ಆಗಿಲ್ಲ”
ಎಂದು ಹೇಳಿ ಕೈ ತೊಳೆಯುವ ಪ್ರಯತ್ನ ಮಾಡಲಾಗಿದೆ.
ಗ್ರಾಹಕರು,
“Google Payನಲ್ಲಿ ಹಣ ಹೋಗುತ್ತಿಲ್ಲ”
ಎಂದು ಸ್ಪಷ್ಟವಾಗಿ ಹೇಳಿದರೂ,
“PhonePeನಲ್ಲಿ ಟ್ರೈ ಮಾಡಿ”
ಎಂಬ ಅಸಂಬದ್ಧ ಉತ್ತರ ನೀಡಿ, ಬ್ಯಾಂಕ್ ಸಿಬ್ಬಂದಿ ತಮ್ಮ ಜವಾಬ್ದಾರಿಯಿಂದ ಪಲಾಯನ ಮಾಡಿದ್ದಾರೆ.
ಗ್ರಾಹಕರು ಅಪ್ಲಿಕೇಶನ್ ಬಗ್ಗೆ ಮಾಹಿತಿ ಇಲ್ಲ, ಸ್ವಲ್ಪ ತಿಳಿಸಿ ಎಂದು ಕೇಳಿದಾಗ,
“PhonePeyವರನ್ನೇ ಮೀಟ್ ಮಾಡಿ”…….? ನಾವು ನಮ್ಮ ಹಣವನ್ನು ಪಡೆಯಲು ಅಥವಾ ಹಣ ವರ್ಗಾವಣೆ ಬಗ್ಗೆ ಸಮಸ್ಯೆ ಬಂದರೆ ಸಂಬಂಧ ಪಟ್ಟ ಬ್ಯಾಂಕ್ ಅನ್ನು ಸಂಪರ್ಕಿಸುವುದು ಸಹಜವಲ್ಲವೇ…? ಗ್ರಾಹಕರ ಸಮಸ್ಯೆ ಗೆ ಪರಿಹಾರ ನೆಡಿವುದು ಅವರ ಕರ್ತವ್ಯವಲ್ಲವೇ…? ಅದನ್ನು ಬಿಟ್ಟು ಈ ಸಿಬ್ಬಂದಿಗಳು phone pay ಯವರನ್ನು ಮೀಟ್ ಮಾಡಿ ಎಂದು ಹೇಳುವುದು ಎಷ್ಟು ಸರಿ….?Uco ಬ್ಯಾಂಕ್ ಸಿಬ್ಬಂದಿಯ ಈ ತೀರಿಯ ವರ್ತನೆ ಸರಿಯೇ, ಸಾರ್ವಜನಿಕರೆಂದರೆ ಈ uco ಬ್ಯಾಂಕ್ ಸಿಬ್ಬಂದಿಗಳ ಕಣ್ಣಿಗೆ ಯಾವ ರೀತಿ ಕಾಣುತ್ತಿರುವರು ಎಂಬುದು ತಿಳಿಯುತ್ತಿಲ್ಲ.
ಇದರ ಬಗ್ಗೆ ದೂರು ನೀಡಲು ಮ್ಯಾನೇಜರ್ ಬಳಿ ಹೋದಾಗಲೂ ನ್ಯಾಯ ದೊರಕಲಿಲ್ಲ. ಮ್ಯಾನೇಜರ್ ಕ್ಷಮೆ ಕೇಳುವ ಬದಲು, ಅವರು ಕ್ಷಮೆ ಕೇಳಿದ್ದಾರೆ ಆದರೂ ನೀವು
“ನೀವು ಮನೇನ್ಸ್ ಇಲ್ಲದವರಂತೆ ನಡೆದುಕೊಳ್ಳಬೇಡಿ“
ಎಂದು ಗ್ರಾಹಕರನ್ನೇ ಗದರಿಸಿರುವುದು, ಗ್ರಾಹಕ ಸೇವೆಯ ಸಂಪೂರ್ಣ ಕುಸಿತಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಇದರಿಂದ ಬೇಸತ್ತು ಗ್ರಾಹಕರು ತಮ್ಮ ಖಾತೆ ಮುಚ್ಚುವುದಾಗಿ ಹೇಳಿ ₹52,279.60 ಹಣ ಹಿಂಪಡೆಯಲು ಮುಂದಾದಾಗ,
ಹಣ ಪಡೆಯಲು ಬಂದವನೇ ಅಪರಾಧಿಯಂತೆ ವರ್ತನೆ – ಬ್ಯಾಂಕ್ ಸಿಬ್ಬಂದಿಯ ಅಹಂಕಾರ ಬಯಲು.
ಕ್ಯಾಸಿಯರ್,
“ಇದು ದೊಡ್ಡ ಮೊತ್ತ. ಈಗ ಹಣ ಇಲ್ಲ. ನಾಲ್ಕು ಗಂಟೆಯ ವರೆಗೆ ಕಾಯಬೇಕು ನಮ್ಮ ಬ್ಯಾಂಕ್ ನಲ್ಲಿ ಹಣವಿಲ್ಲಾ”
ಎಂದು ಉಡಾಫೆ ಧೋರಣೆಯ ಉತ್ತರ ನೀಡಿದ್ದಾರೆ.
ಇಷ್ಟಕ್ಕೂ ತೃಪ್ತಿಯಾಗದಂತೆ, ಮುಖವನ್ನು ಕೇಕ್ಕರಿಸಿಕೊಂಡು
“ಮ್ಯಾನೇಜರ್ ಅತ್ತಿರ ಬೇಕಾದ್ರೆ ಹೋಗಿ” ಎಂದು ಅಹಂಕಾರದಿಂದ ಚಲನ್ ಅನ್ನು ನೀಡಿ

ಮ್ಯಾನೇಜರ್ ಅತ್ತಿರ ಮಾತಾಡಿಕೊಳ್ಳಿ ಎಂಬ ಮಾತು ಹೇಳಿರುತ್ತಾರೆ ಬ್ಯಾಂಕ್ ಸಿಬ್ಬಂದಿಯ ಅಹಂಕಾರದ ಮಾತು ಕೇಳಿ. ಮನನೊಂದು ಗ್ರಾಹಕ ಮ್ಯಾನೇಜರ್ ಅತ್ತಿರ ಓದಮೇಲೆ
ಮ್ಯಾನೇಜರ್ ಮಧ್ಯಪ್ರವೇಶಿಸಿದಾಗ, ಕ್ಯಾಸಿಯರ್, sorry ಸರ್ ನಾನು “ಐದು ಲಕ್ಷ ಅಂದುಕೊಂಡಿದ್ದೆ”
ಎಂದು ಹೇಳಿ ತಪ್ಪನ್ನು ಸಣ್ಣದಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಮಾತು ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಗ್ರಾಹಕರನ್ನು ತುಚ್ಛವಾಗಿ ನೋಡುವ ಮನಸ್ಥಿತಿಯನ್ನು ಬಹಿರಂಗಪಡಿಸಿದೆ.
ಈ ಎಲ್ಲಾ ಗೊಂದಲದ ನಡುವೆ ಗ್ರಾಹಕರು ಸುಮಾರು ಮೂರು ಗಂಟೆಗಳ ಕಾಲ ತಮ್ಮೆಲ್ಲ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ಬ್ಯಾಂಕ್‌ನಲ್ಲಿ ನಿಂತು ಕಾಯಬೇಕಾದ ಅವಮಾನಕಾರಿ ಪರಿಸ್ಥಿತಿ ಎದುರಿಸಿದ್ದಾರೆ.
👉 ಇದು ಬ್ಯಾಂಕ್ ಅಲ್ಲ – ಗ್ರಾಹಕರಿಗೆ ಅವಮಾನ ಮಾಡುವ ಕೇಂದ್ರವೇ?
👉 ನಮ್ಮದೇ ಹಣ ಪಡೆಯಲು ಇಷ್ಟೆಲ್ಲ ಅವಮಾನ ಸಹಿಸಬೇಕೆ?
👉 ಸಾರ್ವಜನಿಕ ಬ್ಯಾಂಕ್‌ಗಳು ಅಧಿಕಾರಿಗಳ ಖಾಸಗಿ ಆಸ್ತಿ ಆಗಿಬಿಟ್ಟಿವೆಯೇ?
ಇಂದು ಶಿವಮೊಗ್ಗದಲ್ಲಿ, ನಾಳೆ ಬೇರೆ ಊರಲ್ಲಿ – ಈ ರೀತಿಯ ವರ್ತನೆ ಹಲವು ಬ್ಯಾಂಕ್‌ಗಳಲ್ಲಿ ಸಾಮಾನ್ಯವಾಗುತ್ತಿದೆ. ಇದು ತಕ್ಷಣವೇ ನಿಲ್ಲಬೇಕಾಗಿದೆ.
ಬ್ಯಾಂಕ್ ಸಿಬ್ಬಂದಿಯ ಮೇಲಧಿಕಾರಿಗಳು Deupty General meneger (DGM)ಇಂತಹ ಅಹಂಕಾರಿ, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು.
ಗ್ರಾಹಕರೊಂದಿಗೆ ಗೌರವಯುತವಾಗಿ ವರ್ತಿಸುವುದು ಉಪಕಾರವಲ್ಲ – ಅದು ಅವರ ಕರ್ತವ್ಯ ವಲ್ಲವೇ ಸ್ವಾಮಿ
ಇಲ್ಲದಿದ್ದರೆ,
Uco ಬ್ಯಾಂಕ್ ನಲ್ಲಿ 3 ಸಿಬ್ಬಂದಿಗಳು ಒಟ್ಟಿಗೆ ಒಬ್ಬ ಗ್ರಾಹಕನನ್ನು ಅವುಮಾನ ಮಾಡಿರುವ ಘಟನೆ….
1. ಬ್ಯಾಂಕ್ ಸಿಬ್ಬಂದಿ ನೀವು phone pay ಅವರನ್ನು ಮೀಟ್ ಮಾಡಿ.
2. ಮ್ಯಾನೇಜರ್ ಇದು ನಿಮ್ಮ ಮನೇನ್ಸ್ ಅಲ್ಲಾ
3. ನಮ್ಮ ಬ್ಯಾಂಕ್ ನಲ್ಲಿ ಹಣ ಇಲ್ಲಾ 4 ಗಂಟೆಯ ವರೆಗೆ ವೈಟ್ ಎಂದು ಹೇಳಿ, ನಂತರ sorry ನಾನು 5 ಲಕ್ಷ ಅಂದುಕೊಂಡಿದ್ದೆ sorry ಗೊತ್ತಾಗಿಲ್ಲ ಎಂದು ಹೇಳುತ್ತಾರೆ ಒಟ್ಟಾರೆ 4 ಗಂಟೆಯ ವರೆಗೆ ಸಮಯಹರಣ ಮಾಡಿ ಗ್ರಾಹಕರಿಗೆ ಅವುಮನ ಮಾಡಿದ್ದಾರೆ
“ಬ್ಯಾಂಕ್ ಗಳು ಸಾರ್ವಜನಿಕರಿಗೆ ಉತ್ತಮ ಸೇವೆ ಕೊಡಲು ಇದಿಯೋ, ಅಥವಾ ನಾವು ಇಂತಹ ಬ್ಯಾಂಕ್ ಗಳಲ್ಲಿ ನಮ್ಮ ಖಾತೆ ತೆರಿದಿದಲ್ಲದೆ ಇಂತಹ ಸಿಬ್ಬಂದಿಗಳ ಅಹಂಕಾರಡಾ ವರ್ತನೆ ಸಹಿಸಲು ಇದೇವೋ?”ಎನ್ನುದು ತಿಳಿಯುತ್ತಿಲ್ಲ…….?
ಮನೇನ್ಸ್ ಅನ್ನುವ ಪದ ಗ್ರಹಕರಿಗಿಲ್ಲವೋ…. ಅಥವಾ ಸಿಬ್ಬಂದಿಗಳಿಗಿಲ್ಲವೂ ಅನ್ನುವುದು ಪ್ರಶ್ನೆ ಯಾಗಿದೆ
