
🔴 ಬ್ರೇಕಿಂಗ್ ನ್ಯೂಸ್ – ಶಿವಮೊಗ್ಗ
ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕರ ಪಿಎ (ಎಫ್‌ಡಿಎ) ಲಕ್ಷ್ಮೀಪತಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.
ದೂರು ಆಧಾರವಾಗಿ, ನಗರದ ನಾಲ್ಕು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳ ತಂಡ ಮನೆ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದೆ.
ದಾಳಿ ನಡೆದ ಸ್ಥಳಗಳು:
ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಲಕ್ಷ್ಮೀಪತಿ ಮನೆ
ಸಿಮ್ಸ್ ಕಾಲೇಜಿನ ಕಚೇರಿ
ಜಗಳೂರು ಮನೇ
ಮೆಗ್ಗಾನ್ ಕ್ವಾಟ್ರಸ್‌ನಲ್ಲಿರುವ ನಿರ್ದೇಶಕರ ಮನೆ
ಸಾಗರ ರಸ್ತೆಯ ಗೋಲ್ಡನ್ ಸಿಟಿಯ ಮನೆ
ಹೊಸದಾಗಿ ಗೃಹಪ್ರವೇಶಿಸಿದ ಜೆ.ಎಚ್. ಬಡಾವಣೆಯ ಎಫ್ ಬ್ಲಾಕ್ 159/A ‘ಮಂಜುನಾಥಸ್ವಾಮಿ ನಿಲಯ’
ಇದೇ ವೇಳೆ, ಸಿಮ್ಸ್ ಕಾಲೇಜಿನ ಡೀನ್ ಡಾ. ವಿರೂಪಾಕ್ಷಪ್ಪ ಅವರ ಮನೆಗಳ ಮೇಲೆ ಕೂಡ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಲೋಕಾಯುಕ್ತವು ಇಂದು ರಾಜ್ಯಾದ್ಯಂತ 51 ಕಡೆ ದಾಳಿ ನಡೆಸಿದ್ದು, ಶಿವಮೊಗ್ಗದಲ್ಲಿ ಮಾತ್ರ ನಾಲ್ಕು ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಲಕ್ಷ್ಮೀಪತಿ ಮೂಲತಃ ಹುಬ್ಬಳ್ಳಿಯಲ್ಲಿ ಲ್ಯಾಬ್ ಟೆಕ್ನಿಷಿಯನ್, ನಂತರ ಎಫ್‌ಡಿಎ ಹುದ್ದೆಗೆ ಪದೋನ್ನತಿ ಪಡೆದಿದ್ದು, 12 ವರ್ಷಗಳಿಂದ ಸಿಮ್ಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
